ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ

ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಕರ್ನಾಟಕ ಸರ್ಕಾರ

ವಿಷನ್ ಡಾಕ್ಯುಮೆಂಟ್

Home

Vision Document

 

ಕರ್ನಾಟಕವು ವೈಜ್ಞಾನಿಕ ಮತ್ತು ತಾಂತ್ರಿಕ ಸಂಸ್ಥೆಗಳು ಮತ್ತು 2005 ರಿಂದ ಕಾರ್ಯನಿರ್ವಹಿಸುತ್ತಿರುವ ಅಕಾಡೆಮಿಯೂ ಸೇರಿದಂತೆ ವಿಜ್ಞಾನ ಜನಪ್ರಿಯಗೊಳಿಸುವ ಮತ್ತು ಪ್ರೋತ್ಸಾಹಿಸುವ ಕೇಂದ್ರಗಳ ಉಪಸ್ಥಿತಿಯೊಂದಿಗೆ ಮುಂಚೂಣಿಯಲ್ಲಿದೆ. ಪ್ರತಿಯೊಂದು ಆರ್ಥಿಕ ಕ್ಷೇತ್ರದಲ್ಲಿ ಜಗತ್ತಿನಾದ್ಯಂತ ಬದಲಾವಣೆಗಳು ಆಗುತ್ತಿರುವ ಹಿನ್ನೆಲೆಯಲ್ಲಿ, ಇತ್ತೀಚೆಗೆ ಬಿಡುಗಡೆ ಮಾಡಿದ ರಾಷ್ಟ್ರೀಯ ಶಿಕ್ಷಣ ನೀತಿ-2020 ಮತ್ತು ಮುಂಬರುವ ರಾಷ್ಟ್ರೀಯ ವಿಜ್ಞಾನ, ತಂತ್ರಜ್ಞಾನ ಆವಿಷ್ಕಾರ ನೀತಿ-2020 ಗಳ ಮೂಲಕ ಭಾರತ ಯುವ ಸಬಲೀಕರಣಕ್ಕೆ ಮುಂದಾಗಿದ್ದು, '21ನೇ ಶತಮಾನಕ್ಕೆ ಕೌಶಲ್ಯಗಳು' ಎಂಬ ಅಂಶಕ್ಕೆ ಒತ್ತು ನೀಡಲಾಗಿದ್ದು,  2030ರ ಉದ್ದೇಶಿತ ಸುಸ್ಥಿರ ಅಭಿವೃದ್ಧಿ ಗುರಿಗಳೊಂದಿಗೆ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ ವಿಷನ್ ನಿರೂಪಣೆಗೆ ಇದು ಒಂದು ಉತ್ತಮ ಅವಕಾಶವಾಗಿದೆ. ವಿಜ್ಞಾನ, ತಂತ್ರಜ್ಞಾನ ಮತ್ತು ಆವಿಷ್ಕಾರ ಕ್ಷೇತ್ರದ ಬೆಳವಣಿಗೆಗಳ ಬಗ್ಗೆ ಅಕಾಡೆಮಿಯು ಮುಂದಿನ ಒಂದು ದಶಕದ ಕಾಲಮಿತಿಯೊಂದಿಗೆ ರಾಜ್ಯದ ಸಂಪನ್ಮೂಲಗಳ ಸಾಮರ್ಥ್ಯ ಮತ್ತು ಜನರ ಆಶೋತ್ತರಗಳನ್ನು ಗಮನದಲ್ಲಿಟ್ಟುಕೊಂಡು ವಿಷನ್-2030 ಅನ್ನು ರೂಪಿಸಿ ಹೊರತಂದಿದೆ.

×
ABOUT DULT ORGANISATIONAL STRUCTURE PROJECTS