ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ

ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಕರ್ನಾಟಕ ಸರ್ಕಾರ

ಸ್ಟೇಟಸ್ ಪತ್ರಿಕೆಗಳು

Home

ಸ್ಟೇಟಸ್ ಪತ್ರಿಕೆ 1

Status Paper1

ವಿಶ್ವವೇ ಕೊರೊನಾ ವೈರಸ್ ಪಿಡುಗಿನ ಹಿಡಿತದಲ್ಲಿದ್ದು, ಜೀವ-ಜೀವನೋಪಾಯದ ಮೇಲೆ ಅದು ದಾಳಿ ಮಾಡಿ  ಹಾನಿಯುಂಟುಮಾಡುತ್ತಿದೆ. ಜೀವ ಹಾನಿಯ ಹೊರತಾಗಿ, ಕೋವಿಡ್-19 ಒಂದು ಅಸಂಭವನೀಯ ಆರ್ಥಿಕ ಬಿಕ್ಕಟ್ಟನ್ನು ಸಹ ಉಂಟುಮಾಡಿದೆ. ಸಾಂಕ್ರಾಮಿಕ ರೋಗದಂತಹ ಅಸಾಧಾರಣ ಸನ್ನಿವೇಶದಲ್ಲಿ ಆರೋಗ್ಯ ರಕ್ಷಣೆ ಮತ್ತು ಸಾರ್ವಜನಿಕ ಸೇವೆಗಳ ವಿವಿಧ ವಿಭಾಗಗಳ ನಡುವೆ ಮತ್ತು ಸಮಾಜದ ವಿವಿಧ ವಿಭಾಗಗಳ ನಡುವೆ ಸಮನ್ವಯವನ್ನು ಸಾಧಿಸಲು ಒಂದು ಪರಿಣಾಮಕಾರಿ ನಾಯಕತ್ವವು ಅಗತ್ಯವಾಗಿದೆ. ವಿಜ್ಞಾನ, ತಂತ್ರಜ್ಞಾನ, ಮೂಲಭೂತ ಸೌಕರ್ಯ, ಸಾರ್ವಜನಿಕ ಸೇವೆಗಳು ಮತ್ತು ಸಮಾಜದ ಸಮಗ್ರತೆಯೊಂದಿಗೆ ಕರ್ನಾಟಕ ಸರ್ಕಾರವು ಸೋಂಕಿನ ಪತ್ತೆ, ಚಿಕಿತ್ಸೆ, ಪುನರ್ವಸತಿ ಮತ್ತು ಸಂವಹನದ ಮೂಲಕ ಬಹು-ಆಯಾಮದ ವಿಧಾನಗಳೊಂದಿಗೆ ಕೋವಿಡ್-19 ಸಾಂಕ್ರಾಮಿಕ ರೋಗವನ್ನು ಹತ್ತಿಕ್ಕಲು ಪ್ರಯತ್ನಿಸುತ್ತಿದೆ. ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಬಿ.ಎಸ್.ಯಡಿಯೂರಪ್ಪ ರವರು ಮತ್ತು ಮಾನ್ಯ ಉಪ ಮುಖ್ಯಮಂತ್ರಿಗಳಾದ ಡಾ. ಸಿ.ಎನ್. ಅಶ್ವಥ್ ನಾರಾಯಣರವರ ಮುಂದಾಳತ್ವವು ಪ್ರತಿಯೊಂದು ಹಂತದಲ್ಲೂ ಎದ್ದು ಕಾಣುತ್ತದೆ. ರಾಷ್ಟ್ರೀಯ ಮಾಧ್ಯಮಗಳು ರಾಜ್ಯದ ನಿರ್ವಹಣಾ ತಂತ್ರಕ್ಕೆ ಸಂಬಂಧಿಸಿದಂತೆ ಅನೇಕ ಸಂದರ್ಭಗಳಲ್ಲಿ ಡಾ. ಸಿ.ಎನ್. ಅಶ್ವಥ್ ನಾರಾಯಣರವರ ಜೊತೆಗೆ ಸಂದರ್ಶನವನ್ನು ನಡೆಸಿರುವುದು ಇದಕ್ಕೆ ನಿದರ್ಶನ. ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯು 'ನಾಯಕತ್ವ ನೀತಿ & ಕಾರ್ಯತಂತ್ರ' ಎಂಬ ಸ್ಟೇಟಸ್ ಪೇಪರ್ ಅನ್ನು ತಯಾರಿಸಿ ಹೊರತಂದಿದೆ. ಕೋವಿಡ್19 ನಿರ್ವಹಣೆಗೆ ಸಂಬಂಧಿಸಿದಂತೆ ಕರ್ನಾಟಕ ಸರ್ಕಾರ ಒಂದು ಅಸಾಮಾನ್ಯ ದೃಷ್ಟಿಕೋನ ಮತ್ತು ಸಮನ್ವಯತೆ ಪ್ರದರ್ಶಿಸಿದೆ ಹಾಗೂ ಇದು ದೇಶಕ್ಕೆ ಮಾದರಿಯಾಗಿದೆ. ಸಮಾಜದಲ್ಲಿ ಕ್ಲಿಷ್ಟಕರ ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ನೀತಿ ಮತ್ತು ಕಾರ್ಯತಂತ್ರಗಳೆರಡರಲ್ಲೂ ಮುಂದಾಳತ್ವವು ಹೇಗೆ ಮಹತ್ವದ ಪಾತ್ರ ವಹಿಸುತ್ತದೆ ಎಂಬುದರ ಪ್ರಾಯೋಗಿಕ ವಿಧಾನಗಳನ್ನು ಒಳಗೊಂಡ ಜ್ಞಾನ ಬಂಢಾರವಾಗಿ ಈ ಸ್ಟೇಟಸ್ ಪೇಪರ್ ಅನ್ನು ಪ್ರಸ್ತುತ ಪಡಿಸಲಾಗಿದೆ. ಇಡೀ ದೇಶದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದಂತೆ ಮುಂಚೂಣಿಯಲ್ಲಿರುವ ಕರ್ನಾಟಕವು ಸಮರ್ಥ ನಾಯಕತ್ವದಿಂದ ಕೋವಿಡ್ ಸಾಂಕ್ರಾಮಿಕವನ್ನು ಸಮರ್ಪಕವಾಗಿ ನಿರ್ವಹಿಸುವಲ್ಲಿ ಯಶಸ್ವಿಯಾಗಿದೆ. ಈ ಪ್ರಕಟಣೆಯು ಎಲ್ಲಾ ರಾಜ್ಯಗಳಿಗೂ ಒಂದು ಉಲ್ಲೇಖದ ದಾಖಲೆಯಾಗಬಹುದೆಂದು ನಿರೀಕ್ಷಿಸಲಾಗಿದೆ.

 

ಸ್ಟೇಟಸ್ ಪತ್ರಿಕೆ 2

Status Paper2

'ಸಮಾಜಕ್ಕಾಗಿ ವಿಜ್ಞಾನ'ದ ಮುನ್ನಡೆಗಳಲ್ಲಿ ಕರ್ನಾಟಕವು ಮುಂಚೂಣಿಯಲ್ಲಿದ್ದು, ಬೆಂಗಳೂರು ಜ್ಞಾನ ಕೇಂದ್ರ ಮತ್ತು ದೇಶದ ವಿಜ್ಞಾನ ರಾಜಧಾನಿ ಎನಿಸಿದೆ. ಬಹುಪಕ್ಷೀಯ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರಯತ್ನಗಳ ಬಗ್ಗೆ ಮಾಹಿತಿಯನ್ನು ಒದಗಿಸುವ ವಿವಿಧ ರೀತಿಯ ದತ್ತಸಂಚಯಗಳು ಲಭ್ಯವಿದ್ದರೂ, ಅವುಗಳೆಲ್ಲದರ ಒಂದು ನೋಟ ಒಂದೇ ಕಡೆ ಪಡೆಯುವುದು ಕಷ್ಟಸಾಧ್ಯ. ಅಕಾಡೆಮಿಯು ಸಾರ್ವಜನಿಕ ಮತ್ತು ಕಾರ್ಪೊರೇಟ್ ವಲಯಗಳಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿ ಪ್ರಯತ್ನಗಳಲ್ಲಿ ತೊಡಗಿಸಿಕೊಂಡಿರುವ ಸಂಸ್ಥೆಗಳು ಮತ್ತು ಮಾನವ ಸಂಪನ್ಮೂಲವನ್ನು ದಾಖಲಿಸುವ ಕಾರ್ಯವನ್ನು ಕೈಗೊಂಡಿತ್ತು, ಅದರ ಪ್ರತಿಫಲವೇ ಈ ಪುಸ್ತಕ. ಇದರಲ್ಲಿ ಸೇರಿಸಲಾದ ಪ್ರಮುಖ ಕ್ಷೇತ್ರಗಳೆಂದರೆ:  ಐಸಿಟಿ ಮತ್ತು ಎಲೆಕ್ಟ್ರಾನಿಕ್ಸ್; ಜೈವಿಕ ತಂತ್ರಜ್ಞಾನ; ಶಿಕ್ಷಣ; ಖಗೋಳಶಾಸ್ತç, ಬಾಹ್ಯಾಕಾಶ ವಿಜ್ಞಾನ ಮತ್ತು ರಕ್ಷಣೆ; ಆರೋಗ್ಯ ಮತ್ತು ಔಷಧ; ಉತ್ಪಾದನೆ ಮತ್ತು ತಯಾರಿಕೆ; ಶಕ್ತಿ; ಕೃಷಿ ಮತ್ತು ಆಹಾರ ತಂತ್ರಜ್ಞಾನ; ಭೂಮಿ, ಪರಿಸರ ಮತ್ತು ಪ್ರವಾಸೋದ್ಯಮ; ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನದ ಮುಂಚೂಣಿ ಕ್ಷೇತ್ರಗಳು. ಇದನ್ನು ಕನ್ನಡ ಮತ್ತು ಇಂಗ್ಲೀಷ್ ಭಾಷೆಯಲ್ಲಿ ಹೊರತರಲಾಗಿದೆ.

 

ಸ್ಟೇಟಸ್ ಪತ್ರಿಕೆ 3

Status Paper3

ಮ್ಯೂಕರ್‌ಮೈಕೋಸಿಸ್‌ನ ಪ್ರಾಮುಖ್ಯತೆಯನ್ನು ಪರಿಗಣಿಸಿ, ಅದರ ಬಗ್ಗೆ ಜಾಗೃತಿ ಮೂಡಿಸಲು, ಅಕಾಡೆಮಿಯು ಈ ಅಪ್ರೋಚ್ ಪತ್ರಿಕೆಯನ್ನು ಹೊರತಂದಿದೆ. ಬೆಂಗಳೂರಿನ ಶ್ರೀ ಅಟಲ್ ಬಿಹಾರಿ ವಾಜಪೇಯಿ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ (ಈ ಹಿಂದೆ ಬೌರಿಂಗ್ ಮತ್ತು ಲೇಡಿ ಕರ್ಜನ್ ಆಸ್ಪತ್ರೆ) ಇಎನ್‌ಟಿ ವಿಭಾಗದ ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರಾದ ಡಾ. ರವಿಶಂಕರ್ ರವರ ನೇತೃತ್ವದ ವೈದ್ಯಕೀಯ ತಜ್ಞರ ತಂಡವು ನಡೆಸಿದ ಪ್ರಸ್ತುತಿಗಳು ಮತ್ತು ಚರ್ಚೆಗಳನ್ನು ಈ ಪತ್ರಿಕೆ ಆಧರಿಸಿದೆ. ಇದನ್ನು ವೈದ್ಯಕೀಯ ವಿಜ್ಞಾನಿ, ಎಮೆರಿಟಸ್ ಪ್ರೊಫೆಸರ್ ಆಫ್ ಮೆಡಿಸಿನ್ ಮತ್ತು ಅಕಾಡೆಮಿಯ ವಿಜ್ಞಾನ ಲೋಕ ಸಂಚಿಕೆಯ ಪ್ರಧಾನ ಸಂಪಾದಕರಾದ ಪ್ರೊ. ಪಿ. ಎಸ್. ಶಂಕರ್ ರವರ ಸಂಪಾದಕತ್ವದಲ್ಲಿ ಹೊರತರಲಾಗಿದೆ

×
ABOUT DULT ORGANISATIONAL STRUCTURE PROJECTS