ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ

ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಕರ್ನಾಟಕ ಸರ್ಕಾರ

ಸ್ಟ್ಯಾಟರ್ಜಿ ಪತ್ರಿಕೆಗಳು

Home

ಕಾರ್ಯತಂತ್ರ ಪತ್ರ-2 : ಕೋವಿಡ್ 19 - ಸ್ಟ್ರಾಟಜಿ ಅಂಡ್ ವೇ ಫಾರ್ವಡ್ ಫಾರ್ ಕರ್ನಾಟಕ

Strategy Paper 1

ಕರ್ನಾಟಕ ಸರ್ಕಾರದ ಯೋಜನೆ, ಕಾರ್ಯಕ್ರಮ ಸಂಯೋಜನೆ, ಮತ್ತು ಸಾಂಖ್ಯಿಕ ಇಲಾಖೆಯ ಸಹಯೋಗದೊಂದಿಗೆ ಕೋವಿಡ್19 ಬಗ್ಗೆ ಅಕಾಡೆಮಿಯು ಹೊರತಂದಿರುವ ಮೊದಲನೇ ಕ್ರಿಯಾತಂತ್ರ ವರದಿ ಇದಾಗಿದೆ. ಸದರಿ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದ್ದು, ಮಾನ್ಯ ಮುಖ್ಯ ಕಾರ್ಯದರ್ಶಿಗಳು ಈ ತಜ್ಞ ಸಮಿತಿಯ ವರದಿಯಲ್ಲಿ ತಮ್ಮ ತಮ್ಮ ಇಲಾಖೆಗೆ ಸಂಬಂಧಿಸಿದ ಶೀಫಾರಸ್ಸುಗಳನ್ನು ಅಳವಡಿಸಿಕೊಳ್ಳಲು ಕ್ರಮ ಕೈಗೊಳ್ಳಬೇಕೆಂದು ಎಲ್ಲಾ ಇಲಾಖೆಗಳಿಗೆ ಸೂಚನೆ ನೀಡಿದ್ದಾರೆ (ಪತ್ರ ಸಂಖ್ಯೆ: ಕೆಇಎ 04 ಇವಿಎನ್ 2020 ದಿನಾಂಕ. 11.08.2020)

 

  

ಕಾರ್ಯತಂತ್ರ ಪತ್ರ-2 : ವ್ಯಾಲ್ಯೂವೇಶನ್ ಆಫ್ ಟೆರಸ್ಟ್ರಿಯಲ್ ಇಕೊಸಿಸ್ಟಂ ಸರ್ವೀಸಸ್

Strategy Paper 2

ಭೂಪರಿಸರ ವ್ಯವಸ್ಥೆ ಸೇವೆಗಳ ಮೌಲ್ಯಮಾಪನವು (ವಿಇಎಸ್) ಲೆಕ್ಕಕ್ಕೆ ಸಿಗದ ಪರಿಸರ ವ್ಯವಸ್ಥೆಯ ಪ್ರಯೋಜನಗಳನ್ನು ಮೌಲ್ಯೀಕರಿಸಲು ನಿಷ್ಪಕ್ಷಪಾತ ಪದ್ಧತಿಯನ್ನು ಒದಗಿಸುತ್ತದೆ ಮತ್ತು ಅರ್ಥಪೂರ್ಣ ನೀತಿ ಮಧ್ಯಸ್ಥಿಕೆಗಳನ್ನು ಅಭಿವೃದ್ಧಿಪಡಿಸಲು ಸಹಾಯ ಮಾಡುತ್ತದೆ. ಈ ನಿಟ್ಟಿನಲ್ಲಿ ಅಕಾಡೆಮಿಯು ಭೂ ಪರಿಸರ ವ್ಯವಸ್ಥೆಯ ಸೇವೆಗಳ ಮೌಲ್ಯಮಾಪನದ ಮೇಲೆ ಕೇಂದ್ರೀಕರಿಸಿ ಈ ಕಾರ್ಯತಂತ್ರ ಪತ್ರವನ್ನು ಹೊರತಂದಿದೆ. ಇದನ್ನು ಪ್ರೊ. ಟಿ. ವಿ. ರಾಮಚಂದ್ರ,  ಸಂಯೋಜಕರು,  ಎನರ್ಜಿ ಅಂಡ್ ವೆಟ್ ಲ್ಯಾಂಡ್ ಗ್ರೂಪ್, ಸೆಂಟರ್ ಫಾರ್ ಇಕಾಲಾಜಿಕಲ್ ಸೈನ್ಸಸ್ (ಸಿಇಎಸ್), ಭಾರತೀಯ ವಿಜ್ಞಾನ ಸಂಸ್ಥೆ ಇವರ ನೇತೃತ್ವದ ತಜ್ಞ ಸಮಿತಿಯು ತಯಾರಿಸಿದ್ದು, ಈ ರೀತಿಯ ಪ್ರಯತ್ನವು ಭಾರತದಲ್ಲಿ ಸಂರಕ್ಷಣೆ, ಯೋಜನೆ ಮತ್ತು ಪರಿಸರ ವ್ಯವಸ್ಥೆ ಆಧಾರಿತ ನಿರ್ವಹಣೆಯಲ್ಲಿ ಪ್ರಮುಖ ಪಾತ್ರ ವಹಿಸುವುದು ನಿಸ್ಸಂದೇಹ.

×
ABOUT DULT ORGANISATIONAL STRUCTURE PROJECTS