ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ

ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಕರ್ನಾಟಕ ಸರ್ಕಾರ

ಪಾಲಿಸಿ ಪತ್ರಿಕೆಗಳು

Home

ಪಾಲಿಸಿ ಪತ್ರಿಕೆ 1: ವಿಜ್ಞಾನ ಸಂವಹನ ಕಾರ್ಯನೀತಿ: ಲಕ್ಷ್ಯ ಕರ್ನಾಟಕ

Policy Paper 1

ಪರಿಣಾಮಕಾರಿ ವಿಜ್ಞಾನ ಸಂವಹನವು, ವಿಜ್ಞಾನ ಮತ್ತು ಫಲಾನುಭವಿಗಳು ಮತ್ತು ಒಟ್ಟಾರೆ ಸಮಾಜ ಇವುಗಳ ನಡುವಿನ ಫಲಕಾರಿ ಸಂಪರ್ಕದ ಕೊನೆಯ ಮತ್ತು ಮಹತ್ವದ ಕೊಂಡಿ. ಸ್ವಚ್ಛ ಭಾರತ, ಸ್ವಸ್ಥಭಾರತ, ಆತ್ಮನಿರ್ಭರ್ ಭಾರತ್, ಲ್ಯಾಬ್ ಟು ಲ್ಯಾಂಡ್ ಮತ್ತು ಸಮರ್ಥ ಭಾರತ ಇತ್ಯಾದಿ ಎಲ್ಲಾ ಅಭಿವೃದ್ಧಿ ಯೋಜನೆಗಳ ಯಶಸ್ಸು ಮೂಲಭೂತವಾಗಿ ಸಮಾಜದ ವಿವಿಧ ವಿಭಾಗಗಳನ್ನು ಉದ್ದೇಶಿಸಿ ನಾವು ಮಾಡುವ ಪರಿಣಾಮಕಾರಿ ವಿಜ್ಞಾನ ಸಂವಹನವನ್ನು ಅವಲಂಬಿಸಿದೆ. ಆದರೆ, ಸಾಕ್ಷರತೆಯ ಮಟ್ಟಗಳು ಹೆಚ್ಚಾಗುತ್ತಿರುವಾಗಲೂ (ಭಾರತದಲ್ಲಿ ಪ್ರಸ್ತುತ ಜನಸಂಖ್ಯೆಯ 74%ಕ್ಕೂ ಹೆಚ್ಚು, ಕರ್ನಾಟಕದಲ್ಲಿ ಒಂದೆರಡು ಹೆಜ್ಜೆ ಮುಂದೆ, ಎಂದರೆ 76%ರಷ್ಟು) ವಿಜ್ಞಾನ ಸಾಕ್ಷರತೆ ಇನ್ನೂ ಕಡಿಮೆ ಪ್ರಮಾಣದಲ್ಲಿಯೇ ಇದೆ. ವಿಜ್ಞಾನ ಸಾಕ್ಷರತೆಯನ್ನು ಹೆಚ್ಚಿಸಲು, ಮತ್ತು ಅಂಧಶ್ರದ್ಧೆ ಮತ್ತು ಕುರುಡು ನಂಬಿಕೆಗಳನ್ನು ನಿರ್ಮಾಲನ ಮಾಡಿ, ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಉತ್ತಮ ತರವಾಗಿ ಅಳವಡಿಸಿಕೊಳ್ಳುವಂತೆ ಮಾಡಿ, ಮತ್ತು ವಿಜ್ಞಾನ ಆಧಾರಿತ ಕಾರ್ಯಾಚರಣೆಗಳನ್ನು ಸುಲಭವಾಗಿ ಅನುಷ್ಠಾನಗೊಳಿಸಿ ಅಭಿವೃದ್ಧಿಯ ವೇಗವನ್ನು ವರ್ಧಿಸಲು ಪರಿಣಾಮಕಾರಿ ವಿಜ್ಞಾನ ಸಂವಹನವು ಬಹಳ ಮುಖ್ಯ.

ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ, ಇನ್ಸ್ಟಿಟ್ಯೂಟ್ ಆಫ್ ಪ್ರಾಂಟಿಯರ್ ಸೈನ್ಸ್ ಅಂಡ್ ಅಪ್ಲಿಕೇಷನ್, ಬೆಂಗಳೂರು ಇವರ ಸಹಯೋಗದಲ್ಲಿ ಜನಜೀವನದ ಎಲ್ಲ ರಂಗಗಳಲ್ಲಿ ಮತ್ತು ಸಮಾಜದ ಎಲ್ಲ ಸ್ತರಗಳಲ್ಲಿ ವಿಜ್ಞಾನ ಮತ್ತು ವೈಜ್ಞಾನಿಕ ಮನೋವೃತ್ತಿಯನ್ನು ಉತ್ತೇಜಿಸುವುದಕ್ಕಾಗಿ ಅನುಷ್ಠಾನ ಸಾಧ್ಯವಾದ ಮತ್ತು ಸರ್ವಾಂತರ್ಗತವಾದ ವಿಜ್ಞಾನ ಸಂವಹನ ಕಾರ್ಯನೀತಿಯನ್ನು ರೂಪಿಸುವ ಧ್ಯೇಯದೃಷ್ಟಿಯಿಂದ ಒಂದು ಕಾರ್ಯನೀತಿ ದಾಖಲೆಯನ್ನು ರೂಪಿಸಿ ಹೊರತಂದಿದೆ. ಭಾರತದಲ್ಲಿ ವಿಜ್ಞಾನ ಸಂವಹನದಲ್ಲಿರುವ ಹೆಚ್ಚಿನ ಸಮಸ್ಯೆಗಳು ಸಾಮಾನ್ಯವಾಗಿದ್ದರೂ ಹಲವು ಪ್ರಾದೇಶಿಕ ಸ್ವಭಾವದ ಸಮಸ್ಯೆಗಳೂ ಇವೆ. ಈ ದಾಖಲೆಯು ಕರ್ನಾಟಕವನ್ನು ಲಕ್ಷಯವಾಗಿಟ್ಟುಕೊಂಡು ವಿಶಿಷ್ಟವಾದ ಶಿಫಾರಸ್ಸುಗಳನ್ನು ನೀಡುತ್ತದೆ.

 

ಪಾಲಿಸಿ ಪತ್ರಿಕೆ 1: ಕರ್ನಾಟಕದಲ್ಲಿ ವಿಜ್ಞಾನ ಶಿಕ್ಷಣದ ಪುನಶ್ಚೇತನ

Policy Paper 2

ಅಕಾಡೆಮಿಯು ತನ್ನ ಎರಡನೇ ಕಾರ್ಯನೀತಿ ದಾಖಲೆಯನ್ನು ಹೊರತಂದಿದೆ. ನುರಿತ ಶಿಕ್ಷಣ ತಜ್ಞರು, ಕರ್ನಾಟಕ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಗಳು ಹಾಗೂ ಅಕಾಡೆಮಿಯ ಸದಸ್ಯರಾದ ಪ್ರೊ. ಎಸ್. ಕೆ. ಸೈದಾಪುರ್ ರವರ ಅಧ್ಯಕ್ಷತೆಯಲ್ಲಿ ರಚಿಸಲಾದ ತಜ್ಞ ಸಮಿತಿಯು “ಕರ್ನಾಟಕದಲ್ಲಿ ವಿಜ್ಞಾನ ಶಿಕ್ಷಣದ ಪುನಶ್ಚೇತನ" ಎಂಬ ಕಾರ್ಯನೀತಿ ದಾಖಲೆಯನ್ನು ರಚಿಸಿದೆ. ಈ ದಾಖಲೆಯಲ್ಲಿ ಭಾರತದಲ್ಲಿ ವಿಜ್ಞಾನ ಶಿಕ್ಷಣದ ಇತಿಹಾಸ, ಡಿಜಿಟಲ್ ಕ್ರಾಂತಿಯ ಸವಾಲುಗಳು ಹಾಗೂ ಉದ್ಯೋಗ ಕ್ಷೇತ್ರದಲ್ಲಾಗುತ್ತಿರುವ ಸಮಸ್ಯೆಗಳು ಹಾಗೂ ವಿಜ್ಞಾನ ಶಿಕ್ಷಣದ ಪುನರುಜ್ಜೀವನದ ಅಗತ್ಯತೆಗಳನ್ನು ತಿಳಿಸಲಾಗಿದೆ. ಕರ್ನಾಟಕದಲ್ಲಿ ವಿಜ್ಞಾನ ಶಿಕ್ಷಣವನ್ನು ಪುನರ್ ರಚಿಸಲು / ಪರಿಷ್ಕರಿಸಲು ಅನುವುಮಾಡಿಕೊಡುವ ಒಂದು ಕ್ರಿಯಾತ್ಮಕ ದಾಖಲೆ ಇದಾಗಿದೆ.

ಪದವಿ ಮತ್ತು ಸ್ನಾತಕೋತ್ತರ ಪದವಿ ಮಟ್ಟಗಳಲ್ಲಿ ವಿಜ್ಞಾನ ಶಿಕ್ಷಣವನ್ನು ಜಾಗತಿಕ ಮಾನದಂಡಗಳಿಗನುಸಾರವಾಗಿ ಆಧುನೀಕರಿಸುವ ನಿಟ್ಟಿನಲ್ಲಿ ಮೂಲ ಸೌಕರ್ಯಗಳು, ಬೋಧಕ ವರ್ಗದ ಸಬಲೀಕರಣ, ಪಠ್ಯಕ್ರಮದ ಅಭಿವೃದ್ಧಿ, ಬೋಧನಾ ಮತ್ತು ಕಲಿಕಾ ಪ್ರಕ್ರಿಯೆಗಳು ಹಾಗೂ ಮೌಲ್ಯಮಾಪನ, ಸಂಶೋಧನೆ ಮತ್ತು ನಾವಿನ್ಯತೆಗಳಿಗೆ ಉತ್ತೇಜನ, ವಿಜ್ಞಾನ ಸಂವಹನ ಹಾಗೂ ನೈತಿಕತೆಯನ್ನು ಕುರಿತು ಈ ದಾಖಲೆಯಲ್ಲಿ ಹಲವಾರು ನಿರ್ದಿಷ್ಟ ಶಿಫಾರಸ್ಸುಗಳನ್ನು ಮಾಡಲಾಗಿದೆ. ಈ ನೀತಿ ಪತ್ರಿಕೆಯನ್ನು ಉನ್ನತ ಶಿಕ್ಷಣ ಇಲಾಖೆ, ವಿಶ್ವವಿದ್ಯಾಲಯಗಳು ಮತ್ತು ಉನ್ನತ ಕಲಿಕಾ ಸಂಸ್ಥೆಗಳಿಗೆ ಕಳುಹಿಸಿಕೊಡಲಾಗಿದೆ.

 

 

×
ABOUT DULT ORGANISATIONAL STRUCTURE PROJECTS